
ಬಿಗ್ ಬಾಸ್ ಶೋ ನಲ್ಲಿ ಫೇವರಿಸಂ ಮಾಡಲಾಗುತ್ತದೆ ಎಂದು ಸ್ಪರ್ಧಿಗಳಾದ ಗಗನ್ ಹಾಗೂ ತಾಂಡವ್ ಮಾತನಾಡಿಕೊಂಡಿದ್ದು ವೀಕೆಂಡ್‌ನಲ್ಲಿ ಚರ್ಚೆಗೆ ಬಂದಿದೆ.
ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ನಿರೂಪಕ ಕಿಚ್ಚ ಸುದೀಪ್ ಅವರು ಇಬ್ಬರೂ ಸ್ಪರ್ಧಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಮಿನೇಟ್ ಆಗದೆ ಉಳಿದುಕೊಂಡಿದ್ದ ಆಸಿಯಾಗೆ ಉಸ್ತುವಾರಿ ಜವಾಬ್ದಾರಿ ನೀಡಲು ಕಾರಣವಿರುವ ಕುರಿತು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.