
ಶಾಲಾ ಶಿಕ್ಷಣ ಇಲಾಖೆ ಗುಡಿಬಂಡೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಬಡ್ಡಿ ಪ್ರೀತಿಯಲ್ಲಿ ಚಿಂತಾಮಣಿಯ ದಿ ಹಾರಿಜನ್ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿದೆ.
14 ವರ್ಷ ವಯೋಮಿತಿಯ ಈ ತಂಡದ ನಾಯಕ ನಿಖಿಲ್ ಹಾಗೂ ಇತರ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಮುರಳಿ ಅವರು ಈ ತಂಡಕ್ಕೆ ಅಗತ್ಯ ತರಬೇತಿ ನೀಡಿದ್ದರು.