
ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸರಳಾ ಬಿರ್ಲಾ ಅಕಾಡೆಮಿ, ಎಜುಕೇಷನ್ ವರ್ಲ್ಡ್ 2025 ರ ಪ್ರಕಾರ ಭಾರತದ ನಂಬರ್ 1 ಬಾಲಕರ ಬೋರ್ಡಿಂಗ್ ಶಾಲೆಯಾಗಿ ಆಯ್ಕೆಯಾಗಿದೆ.
67 ಎಕರೆ ಪ್ರದೇಶದಲ್ಲಿ ಹರಡಿರುವ ಈ ಶಾಲೆಯು 5 ರಿಂದ 12 ನೇ ತರಗತಿಯವರೆಗೆ ಶಿಕ್ಷಣ ನೀಡುತ್ತಿದ್ದು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 1:7 ರಷ್ಟಿದೆ.
ಶಾಲೆಯು IGCSE, ICSE ಮತ್ತು IBDP ಪಠ್ಯಕ್ರಮಗಳನ್ನು ಹೊಂದಿದ್ದು, ಬ್ರಿಟಿಷ್ ಕೌನ್ಸಿಲ್ನಿಂದ ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್ (ISA) ಪಡೆದಿದೆ.