
ಪ್ರಭಾಸ್ ಅವರ 'ಫೌಜಿ' ಸಿನಿಮಾ ಸೆಟ್ನಲ್ಲಿ ಕೀಟ ಕಚ್ಚಿದ್ದರಿಂದ ನಟ ರಾಜೇಶ್ ಶರ್ಮಾ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ವರದಿಗಳನ್ನು ಸ್ವತಃ ನಟ ತಳ್ಳಿಹಾಕಿದ್ದಾರೆ.
ತಮ್ಮ ಅನಾರೋಗ್ಯಕ್ಕೆ ಮಧುಮೇಹ ಮತ್ತು ಕಾಲಿನ ಚರ್ಮದ ಸಮಸ್ಯೆಯೇ ಕಾರಣ ಎಂದು ಸ್ಪಷ್ಟಪಡಿಸಿದ ರಾಜೇಶ್, ಚಿತ್ರತಂಡದ ಮೇಲೆ ಯಾವುದೇ ದೂರು ಇಲ್ಲ ಎಂದು ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳ ಚಿಕಿತ್ಸೆಯ ನಂತರ ರಾಜೇಶ್ ಶರ್ಮಾ ಇದೀಗ ಗುಣಮುಖರಾಗಿದ್ದು, ಮುಂದಿನ ಒಂದು ವಾರದೊಳಗೆ ಚಿತ್ರೀಕರಣಕ್ಕೆ ಮರಳುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.