
ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್: ಎ ಜರ್ನಿ ಇನ್ ಲವ್' ಪುಸ್ತಕದ ಪ್ರಕಟಣೆಯಿಂದ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಹಿಂದೆ ಸರಿದಿದ್ದು, ಇದು ಕೇಂದ್ರ ಸರ್ಕಾರದ ಒತ್ತಡದಿಂದ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ, ಆರ್ಎಸ್ಎಸ್ ಮತ್ತು ಚೀನಾ ಗಡಿ ವಿಷಯಗಳನ್ನು ಪುಸ್ತಕದಿಂದ ತೆಗೆದುಹಾಕುವಂತೆ ಸರ್ಕಾರ ಒತ್ತಡ ಹೇರಿದೆ ಎಂದು ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.
ಈ ವಿವಾದದ ನಂತರ ಪುಸ್ತಕದ ಹಕ್ಕುಗಳನ್ನು ಹಾರ್ಪರ್ ಕಾಲಿಯನ್ಸ್ ಸಂಸ್ಥೆ ಪಡೆಯುವ ಸಾಧ್ಯತೆಯಿದ್ದು, ಯಾವುದೇ ಅಡೆತಡೆ ಎದುರಾದರೂ ಪುಸ್ತಕವನ್ನು ಸಾರ್ವಜನಿಕರ ಮುಂದೆ ತರುವುದಾಗಿ ಕಾಂಗ್ರೆಸ್ ಸ್ಪಷ್ಟಪಡಿಸಿದೆ.