
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಗ್ರಾಮವೊಂದರ ರಸ್ತೆ ಬದಿಯಲ್ಲಿ 9 ಶ್ವಾನಗಳನ್ನು ಹತ್ಯೆ ಮಾಡಿ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಐದು ಹೆಣ್ಣು ಮತ್ತು ನಾಲ್ಕು ಗಂಡು ಶ್ವಾನಗಳ ಬಾಯಿಯನ್ನು ದಾರದಿಂದ ಕಟ್ಟಿ, ಕೋಳಿ ರೆಕ್ಕೆ ಮತ್ತು ಕುಂಕುಮ ಬಳಸಿ ಈ ಕೃತ್ಯ ಎಸಗಲಾಗಿದೆ.
ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳ ರೈತರು ಈ ಅಮಾನವೀಯ ಘಟನೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.