
ವ್ಯಕ್ತಿಗಳ ವಿರುದ್ಧ ರೌಡಿಶೀಟ್ ತೆರೆಯುವ ಅಥವಾ ಮುಂದುವರೆಸುವ ನೋಟಿಸ್ ನೀಡುವ ಮುನ್ನ ಕ್ರಿಮಿನಲ್ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಹಳೆಯ ಮಾಹಿತಿಗಳ ಆಧಾರದ ಮೇಲೆ ರೌಡಿಶೀಟ್ ತೆರೆಯಬಾರದು ಎಂದಿರುವ ನ್ಯಾಯಾಲಯ, ದತ್ತಾಂಶವನ್ನು ನೈಜ ಸಮಯದಲ್ಲಿ ನವೀಕರಿಸುವಂತೆ ಡಿಜಿ ಮತ್ತು ಐಜಿಪಿಗೆ ನಿರ್ದೇಶಿಸಿದೆ.
ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ರೌಡಿಶೀಟ್ ಮುಂದುವರಿಸಲು ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.