
ಹಾಸನಾಂಬೆ ದೇವಿಯ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಬೆಂಗಳೂರು, ಮೈಸೂರು ಹಾಗೂ ಹಾಸನದಿಂದ ವಿಶೇಷ ಬಸ್ ಪ್ಯಾಕೇಜ್‌ಗಳನ್ನು ಘೋಷಿಸಿದೆ.
ಬೆಂಗಳೂರಿನಿಂದ ಹೊರಡುವ ವೋಲ್ವೋ ಬಸ್ ಪ್ರವಾಸದ ಒಟ್ಟು ದೂರ 380 ಕಿ.ಮೀ ಆಗಿದ್ದು, ದರ್ಶನ ಶುಲ್ಕ ₹1,000 ಸೇರಿ ಒಬ್ಬರಿಗೆ ₹2,500 ಟಿಕೆಟ್ ದರ ನಿಗದಿಪಡಿಸಲಾಗಿದೆ.
ಹಾಸನದಿಂದ ಐತಿಹಾಸಿಕ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ವಿವಿಧ ಪ್ಯಾಕೇಜ್ ಬಸ್‌ಗಳು ಸಂಚರಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ www.ksrtc.in ವೆಬ್‌ಸೈಟ್ ಸಂಪರ್ಕಿಸಬಹುದು.