
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಈ ವರ್ಷ ಒಟ್ಟು 24,831 ಎಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿದ್ದು, ಕಳೆದ ವರ್ಷ ಈ ಸಂಖ್ಯೆ 15,403 ಆಗಿತ್ತು.
ಅತಿ ಹೆಚ್ಚು ಬೇಡಿಕೆಯಿರುವ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿಯೇ 6,687 ಸೀಟುಗಳು ಖಾಲಿ ಉಳಿದಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ 3,570 ಸೀಟುಗಳು ಭರ್ತಿಯಾಗಿಲ್ಲ.
ವೆಟರ್ನರಿ ಸೈನ್ಸ್ ಮತ್ತು ಅಗ್ರಿಕಲ್ಚರ್ ಕೋರ್ಸ್ಗಳಿಗೆ ಭಾರಿ ಬೇಡಿಕೆ ಇದ್ದು, ವೆಟರ್ನರಿ ಸೈನ್ಸ್ನಲ್ಲಿ ಈ ವರ್ಷ ಶೇ.100ರಷ್ಟು ಸೀಟುಗಳು ಭರ್ತಿಯಾಗಿವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.