
ರಾಜ್ಯ ಸರ್ಕಾರಿ ನಿರ್ಧಾರದಂತೆ ನವೆಂಬರ್ 1ರಿಂದ ಪರಿಷ್ಕೃತ ಹಾಲಿನ ದರ ಜಾರಿಗೆ ಬಂದಿದ್ದು, ಟೋನ್ಡ್ ಹಾಲಿನ ದರವು 8ರಿಂದ 12 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.
ವಿಶೇಷ ಟೋನ್ಡ್ ಮತ್ತು ಶುಭಂ ಹಾಲಿನ ದರವು ಪ್ರತಿ ಲೀಟರ್‌ಗೆ ₹12 ಹೆಚ್ಚಾಗಿದ್ದು, ಮೊಸರಿನ ದರವು ಅರ್ಧ ಲೀಟರ್‌ಗೆ 6 ರೂ. ಹಾಗೂ ಒಂದು ಲೀಟರ್‌ಗೆ 14 ರೂ. ಏರಿಕೆಯಾಗಿದೆ.
ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ದಿನನಿತ್ಯದ ಖರ್ಚಿಗೆ ಬರೆ ಎಳೆದಂತಾಗಿದ್ದು, ಈ ಅವೈಜ್ಞಾನಿಕ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.