
ರಾಜ್ಯದ ವಿವಿಧೆಡೆ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 565 ಟನ್ಗಳಷ್ಟು ಅಕ್ರಮ ಅನ್ನಭಾಗ್ಯ ಅಕ್ಕಿ ಹಾಗೂ 24 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಬೆಳಗಾವಿಯ ಕಾಗವಾಡ ತಾಲ್ಲೂಕಿನಲ್ಲಿ ಗೋದಾಮಿನಲ್ಲಿದ್ದ 422 ಟನ್ ಅಕ್ಕಿ ಸೇರಿದಂತೆ ಒಟ್ಟು ₹1.34 ಕೋಟಿ ಮೌಲ್ಯದ ಪಡಿತರ ಅಕ್ಕಿ ಹಾಗೂ ₹3.41 ಕೋಟಿ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕರ್ತವ್ಯಲೋಪದ ಆರೋಪದ ಮೇಲೆ ಹುಕ್ಕೇರಿಯ ಆಹಾರ ನಿರೀಕ್ಷಕ ಪ್ರವೀಣ ಸಾಗರ ಮತ್ತು ಶಿರಸ್ತೇದಾರ್ ಎಲ್.ಬಿ.ಡಾಂಗೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆಹಾರ ಇಲಾಖೆ ಆಯುಕ್ತೆ ಬಿ.ಪೂರ್ಣಿಮಾ ಆದೇಶಿಸಿದ್ದಾರೆ.