Economy
ಕರ್ನಾಟಕದಲ್ಲಿ 565 ಟನ್‌ ಅಕ್ರಮ ಅಕ್ಕಿ ವಶ

ಕರ್ನಾಟಕದಲ್ಲಿ 565 ಟನ್‌ ಅಕ್ರಮ ಅಕ್ಕಿ ವಶ

prajavani1h
THE BRIEF
1

ರಾಜ್ಯದ ವಿವಿಧೆಡೆ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 565 ಟನ್‌ಗಳಷ್ಟು ಅಕ್ರಮ ಅನ್ನಭಾಗ್ಯ ಅಕ್ಕಿ ಹಾಗೂ 24 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆಹಾರ ಸಚಿವ ರಿಜ್ವಾನ್‌ ಅರ್ಷದ್‌ ತಿಳಿಸಿದ್ದಾರೆ.

2

ಬೆಳಗಾವಿಯ ಕಾಗವಾಡ ತಾಲ್ಲೂಕಿನಲ್ಲಿ ಗೋದಾಮಿನಲ್ಲಿದ್ದ 422 ಟನ್‌ ಅಕ್ಕಿ ಸೇರಿದಂತೆ ಒಟ್ಟು ₹1.34 ಕೋಟಿ ಮೌಲ್ಯದ ಪಡಿತರ ಅಕ್ಕಿ ಹಾಗೂ ₹3.41 ಕೋಟಿ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

3

ಕರ್ತವ್ಯಲೋಪದ ಆರೋಪದ ಮೇಲೆ ಹುಕ್ಕೇರಿಯ ಆಹಾರ ನಿರೀಕ್ಷಕ ಪ್ರವೀಣ ಸಾಗರ ಮತ್ತು ಶಿರಸ್ತೇದಾರ್‌ ಎಲ್.ಬಿ.ಡಾಂಗೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆಹಾರ ಇಲಾಖೆ ಆಯುಕ್ತೆ ಬಿ.ಪೂರ್ಣಿಮಾ ಆದೇಶಿಸಿದ್ದಾರೆ.