
ಲಂಡನ್ನಲ್ಲಿ ಎಂ.ಟೆಕ್ ಮುಗಿಸಿ ಬಂದಿದ್ದ ವಾಕಾ ಭಾಸ್ಕರ್ ರೆಡ್ಡಿ ಆನ್ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾನೆ.
ಬಾಲಕ ಜೀವಂತವಿದ್ದರೆ ಸಿಕ್ಕಿಬೀಳುತ್ತೇನೆಂಬ ಭಯದಿಂದ ಅಪಹರಣದ ಬೆನ್ನಲ್ಲೇ ಆತನನ್ನು ಕೊಲೆ ಮಾಡಿ, ನಂತರ ಕುಟುಂಬಸ್ಥರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ.
ಪೊಲೀಸರು ಸಿಸಿಟಿವಿ ಹಾಗೂ ಕಾಲ್ ಡಿಟೇಲ್ಸ್ ಆಧರಿಸಿ ತಾಂತ್ರಿಕ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.