
ಕರ್ನಾಟಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸುದೀರ್ಘ ಬೇಡಿಕೆಗೆ ಸ್ಪಂದಿಸಿರುವ ಶಿಕ್ಷಣ ಇಲಾಖೆಯು, ಅರ್ಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆ (OPS) ವ್ಯಾಪ್ತಿಗೆ ತಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.
ಏಪ್ರಿಲ್ 01, 2006ಕ್ಕಿಂತ ಮುಂಚಿತವಾಗಿ ಅಧಿಸೂಚನೆ ಹೊರಡಿಸಿ ನಂತರ ಸೇವೆಗೆ ಸೇರಿದ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಈ ಹಳೆ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಎನ್‌ಪಿಎಸ್ ಕಡಿತವನ್ನು ತಕ್ಷಣವೇ ಸ್ಥಗಿತಗೊಳಿಸಲು ಹಾಗೂ ಅರ್ಹ ನೌಕರರಿಗೆ ಹೊಸ ಜಿಪಿಎಫ್ ಖಾತೆಗಳನ್ನು ಸೃಜಿಸಿ ಹಣ ಇತ್ಯರ್ಥಪಡಿಸುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.