
ಮದುವೆಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ತಡೆ ನೀಡಿದೆ.
ತಮ್ಮ ಮತ್ತು ದೂರುದಾರ ಮಹಿಳೆಯ ನಡುವಿನ ಸಂಬಂಧವು ಸಮ್ಮತಿದಾಯಕವಾಗಿತ್ತು ಎಂದು ಯಶ್ ದಯಾಳ್ ವಾದಿಸಿದ್ದು, ಪ್ರಸಿದ್ಧಿ ಪಡೆದ ನಂತರ ಹಣಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಆರ್ಸಿಬಿ ತಂಡದ ವೇಗಿಯಾಗಿರುವ ಯಶ್ ದಯಾಳ್‌ಗೆ ಈ ಆದೇಶದಿಂದ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಂತಾಗಿದೆ.