
ಬೆಂಗಳೂರಿನಲ್ಲಿ ರಸ್ತೆ ಬದಿ ಬಿದ್ದಿರುವ ಪರಿತ್ಯಕ್ತ ವಾಹನಗಳನ್ನು ತೆರವುಗೊಳಿಸಲು ಜಿಬಿಎ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 6,544 ವಾಹನಗಳನ್ನು ಪತ್ತೆ ಹಚ್ಚಲಾಗಿದೆ.
ನೋಟಿಸ್ ನೀಡಿದ 7 ದಿನಗಳ ಒಳಗೆ ವಾಹನ ತೆರವುಗೊಳಿಸದಿದ್ದರೆ ಟೋಯಿಂಗ್ ಮಾಡಲಾಗುತ್ತಿದ್ದು, ಈಗಾಗಲೇ 352 ವಾಹನಗಳನ್ನು ಜಪ್ತಿ ಮಾಡಲಾಗಿದೆ ಮತ್ತು 600 ಮಾಲೀಕರು ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದಾರೆ.
ಜಪ್ತಿಯಾದ ವಾಹನಗಳನ್ನು ಬಿಡಿಸಿಕೊಳ್ಳಲು ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಬರದಿದ್ದರೆ ಅಂತಹ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಹಾಕಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.