Indian Politics
ವಿಜಯಪುರ: ಕಡಿಮೆ ಬರ ಪರಿಹಾರ ವಿರೋಧಿಸಿ ರೈತರಿಂದ ದೇಣಿಗೆ ಸಂಗ್ರಹ

ವಿಜಯಪುರ: ಕಡಿಮೆ ಬರ ಪರಿಹಾರ ವಿರೋಧಿಸಿ ರೈತರಿಂದ ದೇಣಿಗೆ ಸಂಗ್ರಹ

prajavani8h
THE BRIEF
1

ವಿಜಯಪುರ ಜಿಲ್ಲೆಯಲ್ಲಿ ಬರ ಪರಿಹಾರವಾಗಿ ರೈತರ ಒಂದು ಖಾತೆಗೆ ಕೇವಲ 2,500 ರೂಪಾಯಿ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಗಿದೆ.

2

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿರುವ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮಂಗಳವಾರದಿಂದ ತಾಳಿಕೋಟೆಯಿಂದ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದಾರೆ.

3

ಸಂಗ್ರಹಿಸಿದ ಹಣವನ್ನು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.