
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಅಡಿಯಲ್ಲಿ 9.34 ಕೋಟಿ ಅರ್ಹ ರೈತರಿಗೆ 2000 ರೂ. ಸಹಾಯಧನವು ಅಕ್ಟೋಬರ್ 30ರಂದು ಬಿಡುಗಡೆಯಾಗಲಿದೆ.
ಇನ್ನು ಮುಂದೆ ಪ್ರತಿ ವರ್ಷವೂ ಅರ್ಹ ಫಲಾನುಭವಿಗಳು ಮುಖ ಚಹರೆ ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕೃಷಿ ಇಲಾಖೆ ತಿಳಿಸಿದೆ.
ಕರ್ನಾಟಕದ ಮೈಸೂರು ಜಿಲ್ಲೆಯೊಂದರಲ್ಲೇ ಸುಮಾರು 12,000ಕ್ಕೂ ಅಧಿಕ ರೈತರ ಇ-ಕೆವೈಸಿ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.