
ಶಿವಂ ಅಸೋಸಿಯೇಟ್ ಕಂಪನಿಯ ಮೂಲಕ 2,110 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಶಿವಾನಂದ ಸಿದ್ದಪ್ಪ ನೀಲಣ್ಣನವರ್ನನ್ನು ಮಂಗಳೂರು ವಲಯ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರಿನ ವಿಶೇಷ ಇಡಿ ನ್ಯಾಯಾಲಯವು ಆರೋಪಿಯನ್ನು 12 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದ್ದು, ಈತ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್ಗಢದಲ್ಲಿ ಹೂಡಿಕೆದಾರರಿಗೆ ವಂಚಿಸಿದ್ದಾನೆ.
2019ರಿಂದಲೇ ನಷ್ಟದಲ್ಲಿದ್ದ ಕಂಪನಿಯು ಹೊಸ ಹೂಡಿಕೆದಾರರ ಹಣವನ್ನು ಹಳೆಯವರಿಗೆ ಬಡ್ಡಿ ನೀಡಲು ಬಳಸುತ್ತಿತ್ತು, ಈ ಹಣವನ್ನು ಆರೋಪಿ ಐಷಾರಾಮಿ ಜೀವನ ಮತ್ತು ಆಸ್ತಿ ಖರೀದಿಗೆ ದುರುಪಯೋಗಪಡಿಸಿಕೊಂಡಿದ್ದಾನೆ.