
ಕೆಲ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ಕ್ರಮದಿಂದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ದುರ್ಬಲಗೊಳ್ಳಲಿದೆ ಎನ್ನುವ ಆತಂಕವನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಳ್ಳಿಹಾಕಿದ್ದಾರೆ.
ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ 2,000 ರೂ. ಮೇಲ್ಪಟ್ಟ ಪೇಮೆಂಟ್ಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕವಿರಲಿದ್ದು, ಗರಿಷ್ಠ ಮಿತಿ 300 ರೂ. ನಿಗದಿಪಡಿಸಲಾಗಿದೆ.
ರೈಲ್ವೆ ಟಿಕೆಟ್, ಇನ್ಷೂರೆನ್ಸ್, ಗ್ಯಾಸ್ ಮತ್ತು ವಿದ್ಯುತ್ ಮುಂತಾದ ಯುಟಿಲಿಟಿ ಪಾವತಿಗಳಿಗೆ ಶೇಕಡಾವಾರು ಬದಲು 5 ರೂ. ನಿಗದಿತ ಎಂಡಿಆರ್ ಶುಲ್ಕ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.