
ಡಾಲಿ ಧನಂಜಯ್ ನಿರ್ಮಾಣ ಮಾಡಿ ನಟಿಸಿರುವ ಹಾಸ್ಯ ಪ್ರಧಾನ ಕೌಟುಂಬಿಕ ಹಾಗು ಡಾರ್ಕ್ ಕಾಮಿಡಿ ಸಿನಿಮಾ 'ಮದರ್ ಪ್ರಾಮಿಸ್' ಒಟಿಟಿ ಪ್ರಸಾರಕ್ಕೆ ಸಜ್ಜಾಗಿದೆ.
ಕ್ರೈಮ್, ಕಾಮಿಡಿ ಮತ್ತು ತಾಯಿ-ಮಗನ ಅಪರೂಪದ ಭಾವನಾತ್ಮಕ ಬಂಧವನ್ನು ಬಿಂಬಿಸುವ ಈ ಚಿತ್ರವು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ 'ಜೀ5 ಕನ್ನಡ'ದಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರಿನ ಕಾಲ್ಪನಿಕ ಭೂಗತ ಲೋಕದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಪೂರ್ಣಚಂದ್ರ ಮೈಸೂರು, ವಿನಯಾ ಪ್ರಸಾದ್, ಗೀತಾ ಮತ್ತು ನಾಗಭೂಷಣ್ ಸೇರಿದಂತೆ ದೊಡ್ಡ ತಾರಾಬಳಗವಿದೆ.