
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಸಿದ್ಧತೆಗಳ ಭಾಗವಾಗಿ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಗಜಪಡೆ ಹಾಗೂ ಅಶ್ವಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಗಿದೆ.
ದಸರಾ ಮೆರವಣಿಗೆ ವೇಳೆ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಮತ್ತು ಕುದುರೆಗಳು ಬೆಚ್ಚದಂತೆ ತರಬೇತಿ ನೀಡುವ ಉದ್ದೇಶದಿಂದ ಈ ತಾಲೀಮು ಆಯೋಜಿಸಲಾಗಿದೆ.
ಅಭಿಮನ್ಯು, ಧನಂಜಯ, ಮಹೇಂದ್ರ, ಗೋಪಿ, ಕಾವೇರಿ ಸೇರಿದಂತೆ ಗಜಪಡೆಯ ಎಲ್ಲಾ ಆನೆಗಳು ಈ ಸಿಡಿಮದ್ದು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.