International
ಮ್ಯಾನ್ಮಾರ್ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: 14 ಮಂದಿ ಸಾವು

ಮ್ಯಾನ್ಮಾರ್ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ: 14 ಮಂದಿ ಸಾವು

tv9kannada1h
THE BRIEF
1

ಮ್ಯಾನ್ಮಾರ್‌ನ ಮಧ್ಯ ಸಗೈಂಗ್ ಪ್ರಾಂತ್ಯದಲ್ಲಿರುವ ಬೌದ್ಧ ಮಠವೊಂದರ ಮೇಲೆ ಅಲ್ಲಿನ ಮಿಲಿಟರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ 14 ಜನರು ಸಾವನ್ನಪ್ಪಿದ್ದಾರೆ.

2

ಮ್ಯಾನ್ಮಾರ್‌ನ ಎರಡನೇ ಅತಿ ದೊಡ್ಡ ನಗರವಾದ ಮ್ಯಾಂಡಲೇಯಿಂದ ಪಶ್ಚಿಮಕ್ಕೆ ಸುಮಾರು 75 ಕಿಲೋಮೀಟರ್ ದೂರದಲ್ಲಿರುವ ಮ್ಯಾಂಗ್ ತಾಲೂಕಿನ ಸ್ವೆಲ್ ಲೆ ಓಹ್ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಈ ದಾಳಿ ನಡೆದಿದೆ.

3

ಮಿಲಿಟರಿಯ ಜೇಟ್ ಯುದ್ಧ ವಿಮಾನವೊಂದು ಬೌದ್ಧ ಮಠದ ಮೇಲೆ ಬಾಂಬ್ ಎಸೆದಿದ್ದು, ಮೃತಪಟ್ಟ 14 ಜನರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಮತ್ತು ಇತರ 20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.