
ಬಿಹಾರದಲ್ಲಿ ಆಹಾರ ಸುರಕ್ಷತಾ ಅಭಿಯಾನ ಆರಂಭಿಸಿರುವ ಐಎಎಸ್ ಅಧಿಕಾರಿ ಕುಮಾರ್ ರವಿ, ಕೇವಲ ಮೂರು ತಿಂಗಳಲ್ಲಿ ಎಲ್ಲಾ 38 ಜಿಲ್ಲೆಗಳಲ್ಲಿ 531 ಕಡೆ ಆಹಾರ ಸುರಕ್ಷತಾ ತಪಾಸಣೆ ನಡೆಸಿದ್ದಾರೆ.
ದಾಳಿಯ ವೇಳೆ ಕಳಪೆ ಗುಣಮಟ್ಟ ಸಾಬೀತಾದ ಸುಮಾರು 17.32 ಲಕ್ಷ ರೂ. ಮೌಲ್ಯದ ಹಾನಿಕಾರಕ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾದ 15 ವಾಣಿಜ್ಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, 2 ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.