Sports
ಕಾಮನ್‌ವೆಲ್ತ್ ಜುಡೋ: ಭಾರತದ ಮೂವರು ಆಟಗಾರರು ಫೈನಲ್‌ಗೆ

ಕಾಮನ್‌ವೆಲ್ತ್ ಜುಡೋ: ಭಾರತದ ಮೂವರು ಆಟಗಾರರು ಫೈನಲ್‌ಗೆ

prajavani3h
THE BRIEF
1

ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಜುಡೋ ವಿಭಾಗದಲ್ಲಿ ಅಸ್ಮಿತಾ ಡೇ, ಹರ್ಷ ಸಿಂಗ್ ಮತ್ತು ಯಾಮಿನಿ ಮೌರ್ಯ ಫೈನಲ್ ಪ್ರವೇಶಿಸುವ ಮೂಲಕ ಮೂರು ಬೆಳ್ಳಿ ಪದಕಗಳನ್ನು ಖಚಿತಪಡಿಸಿದ್ದಾರೆ.

2

ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅಸ್ಮಿತಾ, ಪುರುಷರ 60 ಕೆಜಿ ವಿಭಾಗದಲ್ಲಿ ಹರ್ಷ ಮತ್ತು ಮಹಿಳೆಯರ 57 ಕೆಜಿ ವಿಭಾಗದಲ್ಲಿ ಯಾಮಿನಿ ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

3

ಇದೇ ವೇಳೆ ಶ್ರದ್ಧಾ ಚೋಪಡೆ ಮತ್ತು ರೋಹಿತ್ ಬಸೀರ್ ಮಜ್ಗುಲ್ ಅವರು ರೆಪೆಷಾಜ್ ಸುತ್ತಿನಲ್ಲಿ ಸೋಲುವ ಮೂಲಕ ಪದಕದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.