
ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಸುಮಾರು 240 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 'ವಿರ್ಗೋ ಟ್ರಾನ್ಸ್‌ಪೋರ್ಟ್ 8' ಎಂಬ ಬೃಹತ್ ಪ್ರಯಾಣಿಕ ಹಡಗು ಮಾರ್ಗಮಧ್ಯೆ ಸಂಪರ್ಕ ಕಳೆದುಕೊಂಡಿದೆ.
ಪೂರ್ವ ಜಾವಾದ ಸುರಬಯಾದಿಂದ ಬೊರ್ನಿಯೊ ದ್ವೀಪದ ಬಂಜರ್‌ಮಾಸಿನ್ ಕಡೆಗೆ ತೆರಳುತ್ತಿದ್ದ ಹಡಗು ಹಠಾತ್ ಪ್ರತಿಕೂಲ ಹವಾಮಾನ ಹಾಗೂ ಭಾರಿ ಅಲೆಗಳಿಗೆ ಸಿಲುಕಿ ಸಂವಹನ ವ್ಯವಸ್ಥೆ ಕಳೆದುಕೊಂಡಿದೆ.
ಹಡಗಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರೂ, ಮುಳುಗಡೆಯಾಗಿರುವ ಕುರಿತು ಅಥವಾ ಯಾವುದೇ ಸಾವುನೋವುಗಳ ಬಗ್ಗೆ ಸದ್ಯಕ್ಕೆ ಅಧಿಕೃತ ವರದಿಗಳು ಬಂದಿಲ್ಲ.