
ಪತ್ನಿಯನ್ನು ಸ್ಟುಪಿಡ್ ಅಥವಾ ಉಪಯೋಗವಿಲ್ಲದವಳು ಎಂದು ಬೈಯುವುದು ಗಂಡನ ವೈಯಕ್ತಿಕ ನಡವಳಿಕೆ ಅಥವಾ ಕೋಪದ ಸ್ವಭಾವವಾಗಿದ್ದು, ಅದನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
2021ರಲ್ಲಿ ವಿವಾಹವಾಗಿದ್ದ ದಂಪತಿ ಕೆನಡಾದ ಟೊರಾಂಟೋಗೆ ತೆರಳಿದ್ದ ವೇಳೆ, 2023ರಲ್ಲಿ ಪತ್ನಿ ಅಪಾರ್ಟ್ಮೆಂಟ್ ನ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಅವರು ಬರೆದಿದ್ದ ಡೆತ್ ನೋಟ್ ನಲ್ಲಿ ಸೂಕ್ತ ಕೆಲಸ ಸಿಗದೆ ಪರದಾಡುತ್ತಿರುವುದಾಗಿ ತಿಳಿಸಿದ್ದರು.
ಘಟನೆ ನಡೆದಾಗ ಪತಿ ಆ ಸ್ಥಳದಲ್ಲಿರಲಿಲ್ಲ ಹಾಗೂ ಡೆತ್ ನೋಟ್ ನಲ್ಲಿಯೂ ಕಿರುಕುಳದ ಉಲ್ಲೇಖವಿರಲಿಲ್ಲ ಎಂದು ತಿಳಿಸಿದ ಸುಪ್ರೀಂ ಕೋರ್ಟ್, ಬೊಂಬಾಯಿ ಹೈಕೋರ್ಟ್ ಆದೇಶ ಬದಿಗೊತ್ತಿ ಪತಿಯ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಿದೆ.