
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರ ಮುಂಬೈನ ನಿವಾಸದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.
ಸಲ್ಮಾನ್ ಖಾನ್ ಅವರು ತಮ್ಮ ಕೈಗೆ ಕಟ್ಟಲಾಗಿದ್ದ ರಾಖಿಗಳನ್ನು ಪಾಪರಾಜಿಗಳ ಮುಂದೆ ಪ್ರದರ್ಶಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾನ್ ಕುಟುಂಬವು ಪ್ರತಿವರ್ಷ ಅಲ್ವಿರಾ ಅವರ ಮನೆಯಲ್ಲಿಯೇ ರಕ್ಷಾ ಬಂಧನ ಆಚರಿಸುವುದು ವಾಡಿಕೆಯಾಗಿದ್ದು, ಈ ಬಾರಿ ಹಿರಿಯ ನಟಿ ಹೆಲನ್ ಕೂಡ ಪಾಲ್ಗೊಂಡಿದ್ದರು.