
17 ಬಾರಿಯ ಚಾಂಪಿಯನ್ ಮೋಹನ್ ಬಾಗಾನ್ ಸೂಪರ್ ಜೈಂಟ್ಸ್ ತಂಡವು ಶಿಲ್ಲಾಂಗ್ನಲ್ಲಿ ನಡೆದ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ನಾರ್ತ್ಈಸ್ಟ್ ಯುನೈಟೆಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.
ನಿಗದಿತ ಅವಧಿಯಲ್ಲಿ ಗೋಲುರಹಿತವಾಗಿ ಡ್ರಾಗೊಂಡ ಪಂದ್ಯದಲ್ಲಿ, ಪೆನಾಲ್ಟಿ ಶೂಟೌಟ್ನಲ್ಲಿ ಎರಡು ನಿರ್ಣಾಯಕ ಯತ್ನಗಳನ್ನು ತಡೆದ ಗೋಲ್ಕೀಪರ್ ವಿಶಾಲ್ ಕೈತ್ ನೆರವಿನಿಂದ ಮೋಹನ್ ಬಾಗಾನ್ 4–3 ಅಂತರದಲ್ಲಿ ಜಯ ಗಳಿಸಿತು.
ಮೋಹನ್ ಬಾಗಾನ್ ತಂಡವು ಭಾನುವಾರ ನಡೆಯಲಿರುವ ‘ಕೋಲ್ಕತ್ತ ಡರ್ಬಿ’ ಫೈನಲ್ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಹಾಗೂ 16 ಬಾರಿಯ ಚಾಂಪಿಯನ್ ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸಲಿದೆ.