Sports
ಡುರಾಂಡ್‌ ಕಪ್‌: ನಾರ್ತ್‌ಈಸ್ಟ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಮೋಹನ್‌ ಬಾಗಾನ್‌

ಡುರಾಂಡ್‌ ಕಪ್‌: ನಾರ್ತ್‌ಈಸ್ಟ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಮೋಹನ್‌ ಬಾಗಾನ್‌

prajavani2h
THE BRIEF
1

17 ಬಾರಿಯ ಚಾಂಪಿಯನ್‌ ಮೋಹನ್‌ ಬಾಗಾನ್‌ ಸೂಪರ್‌ ಜೈಂಟ್ಸ್‌ ತಂಡವು ಶಿಲ್ಲಾಂಗ್‌ನಲ್ಲಿ ನಡೆದ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ನಾರ್ತ್‌ಈಸ್ಟ್ ಯುನೈಟೆಡ್ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದೆ.

2

ನಿಗದಿತ ಅವಧಿಯಲ್ಲಿ ಗೋಲುರಹಿತವಾಗಿ ಡ್ರಾಗೊಂಡ ಪಂದ್ಯದಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಎರಡು ನಿರ್ಣಾಯಕ ಯತ್ನಗಳನ್ನು ತಡೆದ ಗೋಲ್‌ಕೀಪರ್‌ ವಿಶಾಲ್ ಕೈತ್ ನೆರವಿನಿಂದ ಮೋಹನ್‌ ಬಾಗಾನ್‌ 4–3 ಅಂತರದಲ್ಲಿ ಜಯ ಗಳಿಸಿತು.

3

ಮೋಹನ್ ಬಾಗಾನ್ ತಂಡವು ಭಾನುವಾರ ನಡೆಯಲಿರುವ ‘ಕೋಲ್ಕತ್ತ ಡರ್ಬಿ’ ಫೈನಲ್‌ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಹಾಗೂ 16 ಬಾರಿಯ ಚಾಂಪಿಯನ್‌ ಈಸ್ಟ್‌ ಬೆಂಗಾಲ್ ತಂಡವನ್ನು ಎದುರಿಸಲಿದೆ.