
KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ವೇಳೆ, ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ 1.50 ಕೋಟಿ ರೂ. ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಸಂಗ್ರಹಿಸಿದ ಹಣದಲ್ಲಿ 1.30 ಕೋಟಿ ರೂ. ಮೊತ್ತವನ್ನು ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ನಗದು ರೂಪದಲ್ಲಿ ಕನ್ನಾಳೆ ನೀಡಿದ್ದ.
ಜನವರಿ 9ರಂದು ಪರೀಕ್ಷೆ ನಿಗದಿಯಾಗಿದ್ದರೂ, ಜನವರಿ 7ರಂದೇ ಕನ್ನಾಳೆಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರವನ್ನು ಜ್ಞಾನೇಂದ್ರ ನೀಡಿದ್ದರು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.