
ದಾವಣಗೆರೆಯ ಬ್ರೇನ್ ಡೆಡ್ ಆದ 48 ವರ್ಷದ ನರೇಶ್ ಎಚ್.ವಿ. ಅವರ ಕುಟುಂಬದವರು ಅಂಗಾಂಗ ದಾನ ಮಾಡುವ ಮೂಲಕ 6 ಜನರ ಬದುಕಿಗೆ ಬೆಳಕಾಗಿದ್ದಾರೆ.
ಅಕ್ಟೋಬರ್ 23 ರಂದು ಮೃತಪಟ್ಟ ನರೇಶ್ ಅವರ ಎರಡು ಮೂತ್ರಪಿಂಡ, ಯಕೃತ್, ಹೃದಯ ಹಾಗೂ ಕಣ್ಣುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಪಡೆದಿದ್ದಾರೆ.
ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದ ರೋಗಿಗಳಿಗೆ ಈ ಅಂಗಾಂಗಗಳನ್ನು ಕಸಿ ಮಾಡಲು ಯಶಸ್ವಿಯಾಗಿ ಹಂಚಿಕೆ ಮಾಡಲಾಗಿದೆ.