
ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಬೆಂಗಳೂರು ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಪ್ರಯಾಣಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೈಯಲ್ಲಿ ಟ್ರಾಲಿ ಬ್ಯಾಗ್ ಹಿಡಿದು ಸರಳವಾಗಿ ಮೆಟ್ರೋದಲ್ಲಿ ನಿಂತಿರುವ ಶ್ರೀನಾಥ್ ಅವರ ಫೋಟೋವನ್ನು ನೋಡಿ ಅಭಿಮಾನಿಗಳು ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ.
1991 ರಿಂದ 2003ರವರೆಗೆ ಭಾರತ ತಂಡದ ಪರ ಆಡಿದ ಶ್ರೀನಾಥ್, 67 ಟೆಸ್ಟ್‌ಗಳಲ್ಲಿ 236 ವಿಕೆಟ್ ಮತ್ತು 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.