
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ 'ನಮ್ಮ ಭೂಮಿ ನಮ್ಮ ಹಕ್ಕು' ಘೋಷಣೆಯಡಿ ಪಾದಯಾತ್ರೆ ಆರಂಭಿಸಿವೆ.
ಆಗಸ್ಟ್ 09 ರಂದು ಬೈರಮಂಗಲದಿಂದ ಆರಂಭವಾದ ಈ ಪಾದಯಾತ್ರೆಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಭಾಗವಹಿಸಿದ್ದು, ಮೊದಲ ದಿನ 7 ಕಿ.ಮೀ ಕ್ರಮಿಸಲಾಗಿದೆ.
ಎರಡನೇ ದಿನವಾದ ನಾಳೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಒಟ್ಟು 15 ಕಿ.ಮೀ ದೂರದವರೆಗೆ ಯಾತ್ರೆ ಸಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.