
ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (ಎನ್ಪಿಪಿಎ) ಸಾರ್ವಜನಿಕ ಹಿತದೃಷ್ಟಿಯಿಂದ ಪಟ್ಟಿಯಲ್ಲಿಲ್ಲದ 137 ಕ್ಯಾನ್ಸರ್ ಔಷಧಿಗಳ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ.
ಈ ನಿರ್ಧಾರದಿಂದಾಗಿ ಗುರುತಿಸಲಾದ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆಯು ಶೇ. 70ರವರೆಗೆ ಕಡಿಮೆಯಾಗಲಿದ್ದು, ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಲಾಗಿದೆ.
ಎಲ್ಲಾ ತಯಾರಿಕಾ ಕಂಪನಿಗಳು ಪರಿಷ್ಕೃತ ಬೆಲೆಯನ್ನು ಎನ್ಪಿಪಿಎಗೆ ತಿಳಿಸಬೇಕಾಗಿದ್ದು, ಹೊಸ ದರಗಳು ನವೆಂಬರ್ 9ರಿಂದ ಜಾರಿಗೆ ಬರಲಿವೆ.