Health & Environment
ಮದ್ಯಮುಕ್ತ ನಾಡು ನಿರ್ಮಾಣಕ್ಕೆ ಸ್ವಾಮೀಜಿಗಳ ಮುಂದಾಳತ್ವ ವಹಿಸಬೇಕು: ಸಾಣೇಹಳ್ಳಿ ಶ್ರೀ

ಮದ್ಯಮುಕ್ತ ನಾಡು ನಿರ್ಮಾಣಕ್ಕೆ ಸ್ವಾಮೀಜಿಗಳ ಮುಂದಾಳತ್ವ ವಹಿಸಬೇಕು: ಸಾಣೇಹಳ್ಳಿ ಶ್ರೀ

prajavani1h
THE BRIEF
1

ರಾಜ್ಯದ ಪ್ರತಿಯೊಬ್ಬ ಸ್ವಾಮೀಜಿಯೂ 10 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಮದ್ಯಮುಕ್ತ ನಾಡು ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

2

ಸಾಣೇಹಳ್ಳಿಯಲ್ಲಿ ನಡೆದ ನಾಟಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಪರಿವರ್ತನೆಗಾಗಿ ತಾಯಂದಿರು ಹೋರಾಟ ಮಾಡಿದರೆ ದುಶ್ಚಟಗಳನ್ನು ಖಂಡಿತ ತಡೆಯಬಹುದು ಎಂದರು.

3

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ರಾಯಚೂರಿನ ಹಟ್ಟಿ ಗ್ರಾಮಕ್ಕೆ ಪ್ರಶಸ್ತಿ ನೀಡಿದ ಬಳಿಕ ಕೊಪ್ಪಳ ಜಿಲ್ಲೆಯ 20 ಹಳ್ಳಿಗಳು ಮದ್ಯಮುಕ್ತವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.