
ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಫಲಾನುಭವಿಗಳು ಇನ್ನು ಮುಂದೆ ತಮ್ಮ ಪತಿಯ ಆಧಾರ್ ಕಾರ್ಡ್ ಅನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಯೋಜನೆಯ ಅಕ್ರಮ ತಡೆಯಲು ಮತ್ತು ಅರ್ಹರನ್ನು ಖಚಿತಪಡಿಸಲು ಸರ್ಕಾರವು ಮನೆಮನೆಗೆ ಭೇಟಿ ನೀಡಿ ಮರುಪರಿಶೀಲನೆ ನಡೆಸುತ್ತಿದೆ.
ಆಧಾರ್ ಕಾರ್ಡ್‌ಗೆ ಅನುಗುಣವಾಗಿ ಹೆಸರು ಮತ್ತು ವಿಳಾಸ ಹೊಂದಿರಬೇಕು ಮತ್ತು ಸಾಲವಿಲ್ಲದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂದು ಸರ್ಕಾರ ಸೂಚಿಸಿದೆ.