
ಮರಳು ಸಾಗಣೆ ಲಾರಿ ಚಾಲಕನಿಂದ 30,000 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಧಾರವಾಡ ಲೋಕಾಯುಕ್ತ ಪೊಲೀಸರು ನಾಲ್ವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಧಾರವಾಡ ನಗರ ಠಾಣೆಯ ಹಸನ್ಸಾಬ ನದಾಫ್, ಸಂಚಾರಿ ಠಾಣೆಯ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಗಿರೀಶ ಮನ್ಸೂರು ಹಾಗೂ ಹೋಮ್ಗಾರ್ಡ್ ಇಕ್ಬಾಲ್ ನದಾಫ್ ಸೇರಿದ್ದಾರೆ.
ಆರೋಪಿಗಳು ಫೋನ್ ಪೇ ಮೂಲಕ ಲಂಚದ ಹಣವನ್ನು ಸ್ವೀಕರಿಸಿದ್ದು, ಈ ಡಿಜಿಟಲ್ ದಾಖಲೆಗಳು ಮತ್ತು ಅವರ ಮೊಬೈಲ್ಗಳನ್ನು ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ಜಪ್ತಿ ಮಾಡಿದೆ.