
ಪುತ್ತೂರಿನ ದರ್ಬೆಯಲ್ಲಿ ಆಗಸ್ಟ್ 21ರಂದು ನಡೆದ ಗಲಾಟೆ ಮತ್ತು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ, ಆಗಸ್ಟ್ 25ರಂದು ಹಿಂದೂ ಜಾಗರಣ ವೇದಿಕೆ ಬಂದ್‌ಗೆ ಕರೆ ನೀಡಿದೆ.
ಈ ಘಟನೆಯ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ವ್ಯವಸ್ಥಿತ ಸಂಚಿದೆ ಎಂದು ಆರೋಪಿಸಿರುವ ಹಿಂಜಾವೇ, ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಸುಳ್ಯ ತಾಲೂಕಿನ ಫಾತಿಮತ್ ಮಿಸ್ವಾನ (32) ಎಂಬವರು ದಾಖಲೆಗಳ ಲ್ಯಾಮಿನೇಷನ್‌ಗೆ ಬಂದಿದ್ದಾಗ ಅಂಗಡಿ ಮಾಲೀಕರೊಂದಿಗೆ ನಡೆದ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ್ದು, ಪೊಲೀಸರು ದೂರು-ಪ್ರತಿದೂರು ದಾಖಲಿಸಿಕೊಂಡಿದ್ದಾರೆ.