
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆಗೆ ಕರೆತಂದಿದ್ದ ಖಾದಿರ್ ಅಲಿ ರಜಾಕ್ ಅಲಿ ಎಂಬ ಆರೋಪಿ ಕರ್ತವ್ಯದಲ್ಲಿದ್ದ ಡಾ. ಶ್ರದ್ಧಾ ಭೂಮ್ರೆ ಅವರ ಕೆನ್ನೆಗೆ ಬಾರಿಸಿದ್ದಾನೆ.
ಆಸ್ಪತ್ರೆಯಲ್ಲಿದ್ದ ಐವರು ಪೊಲೀಸ್ ಸಿಬ್ಬಂದಿಯ ಕಣ್ಮುಂದೆಯೇ ಈ ದಾಳಿ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಲ್ಲೆ ನಡೆಸಿದ ಆರೋಪಿ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು, ಇಲ್ಲವಾದರೆ ಒಪಿಡಿ ಸೇವೆ ಸ್ಥಗಿತಗೊಳಿಸುವುದಾಗಿ ವೈದ್ಯರ ಸಂಘ ಎಚ್ಚರಿಸಿದೆ.