
ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಸಾಂಪ್ರದಾಯಿಕ 'ವಜ್ರಮುಷ್ಠಿ ಕಾಳಗ'ಕ್ಕೆ ಚಾಮರಾಜನಗರದ ಸತೀಶ್ ಜಟ್ಟಿ ಸಜ್ಜಾಗಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕಠಿಣ ತರಬೇತಿ ಪಡೆಯುತ್ತಿರುವ ಸತೀಶ್, ಇದೇ ಮೊದಲ ಬಾರಿಗೆ ಈ ಕಾಳಗದಲ್ಲಿ ಭಾಗವಹಿಸುತ್ತಿದ್ದಾರೆ.
ವಜ್ರಮುಷ್ಠಿ ಕಾಳಗದಲ್ಲಿ ಬೆರಳಲ್ಲಿ ವಜ್ರದ ನಖ ಧರಿಸಿ ಪೈಲ್ವಾನರು ಕಾದಾಡುತ್ತಾರೆ, ತಲೆಯಿಂದ ರಕ್ತ ಸುರಿದರೆ ಕಾಳಗ ಮುಕ್ತಾಯಗೊಳ್ಳುತ್ತದೆ.