
'ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ಮೂರೇ ವಾರಕ್ಕೆ ಫಿನಾಲೆ ಮಾಡಿದಂತೆ, ಈ ಬಾರಿಯೂ ಮಧ್ಯರಾತ್ರಿ ನಡೆದ ಎಲಿಮಿನೇಷನ್ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಮೂವರು ಸ್ಪರ್ಧಿಗಳು ಹೊರಹೋಗಿದ್ದಾರೆ ಎನ್ನಲಾಗಿದೆ.
ಮೂವರು ಸ್ಪರ್ಧಿಗಳು ಹೊರಬಂದಿರುವುದರಿಂದ ಸ್ಪರ್ಧಿಗಳ ಸಂಖ್ಯೆ 11ಕ್ಕೆ ಕುಸಿದಿದ್ದು, ಆಟದ ರೋಚಕತೆ ಕಾಯ್ದುಕೊಳ್ಳಲು ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವ ಸ್ಪರ್ಧಿಗಳಿಗೆ ಈಗಾಗಲೇ ಮನೆಯವರ ಆಟದ ಬಗ್ಗೆ ಸ್ಪಷ್ಟ ಕಲ್ಪನೆ ಇರುವುದರಿಂದ ಇದು ಸ್ಪರ್ಧೆಯನ್ನು ಮತ್ತಷ್ಟು ಕುತೂಹಲಕಾರಿಯನ್ನಾಗಿಸಲಿದೆ.