
ಕಳೆದ ಮಾರ್ಚ್ ತಿಂಗಳಿಂದ ಹೊಸ ಗೃಹಬಳಕೆಯ ಎಲ್ಪಿಜಿ ಸಂಪರ್ಕಗಳ ವಿತರಣೆ ಸ್ಥಗಿತಗೊಂಡಿದ್ದು, ಹೊಸದಾಗಿ ಅರ್ಜಿ ಸಲ್ಲಿಸಿದ ಗ್ರಾಹಕರು ಪರದಾಡುವಂತಾಗಿದೆ.
ಕೇಂದ್ರ ಸರ್ಕಾರದಿಂದ ಹೊಸ ಸಂಪರ್ಕಗಳಿಗೆ ಅಗತ್ಯ ಅನುಮೋದನೆ ಸಿಗದ ಕಾರಣ, ರಾಜ್ಯದ ಗ್ಯಾಸ್ ಏಜೆನ್ಸಿಗಳಲ್ಲಿ 200 ರಿಂದ 300ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ.
ಹೊಸದಾಗಿ ಮದುವೆಯಾದವರು ಮತ್ತು ಉದ್ಯೋಗ ಅರಸಿ ಬಂದ ಕುಟುಂಬಗಳು ಅಡುಗೆ ಅನಿಲವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.