
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಆರ್ಪಿಎಫ್, 47 ವರ್ಷಗಳ ಬಳಿಕ ಸತತ 12 ತಿಂಗಳು ಕಾರ್ಯಾಚರಣೆಯಲ್ಲಿ ಯಾವುದೇ ಯೋಧನ ಪ್ರಾಣಹಾನಿಯಾಗದ ಐತಿಹಾಸಿಕ ಸಾಧನೆ ಮಾಡಿದೆ.
ಅತ್ಯಾಧುನಿಕ ಯುದ್ಧೋಪಕರಣಗಳು, ಉತ್ತಮ ತರಬೇತಿ, ನಿಖರ ಕಾರ್ಯಾಚರಣೆ ಯೋಜನೆ ಮತ್ತು ಗಾಯಾಳು ಯೋಧರ ತ್ವರಿತ ವೈದ್ಯಕೀಯ ಸಾಗಣೆ ಈ ಸಾಧನೆಗೆ ಕಾರಣವಾಗಿವೆ.
ಈ ಸಾಧನೆ ಸಂದರ್ಭದಲ್ಲಿ ಸಿಆರ್ಪಿಎಫ್ 3 ಲಕ್ಷಕ್ಕೂ ಹೆಚ್ಚು ಯೋಧರೊಂದಿಗೆ ನಕ್ಸಲ್ ಪೀಡಿತ ಪ್ರದೇಶಗಳು, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.