
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಕಿವಿಯೊಳಗೆ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೋಂಕು ಉಂಟಾಗುವ ಅಪಾಯವಿದ್ದು, ಕಿವಿಯ ಸ್ವಚ್ಛತೆ ಮತ್ತು ಒಣತನದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.
ಕಿವಿಯಲ್ಲಿ ನೋವು, ತುರಿಕೆ, ದ್ರವ ಹೊರಬರುವುದು ಅಥವಾ ಕೇಳಿಸುವಿಕೆ ಕಡಿಮೆಯಾಗುವ ಲಕ್ಷಣಗಳು 2-3 ದಿನಗಳಿಗಿಂತ ಹೆಚ್ಚು ಮುಂದುವರಿದರೆ ತಕ್ಷಣ ENT ತಜ್ಞರನ್ನು ಸಂಪರ್ಕಿಸಬೇಕು.
ಕಿವಿಯೊಳಗೆ ಕಡ್ಡಿ, ಪಿನ್ ಅಥವಾ ಚೂಪಾದ ವಸ್ತುಗಳನ್ನು ಹಾಕಬಾರದು ಮತ್ತು ವೈದ್ಯರ ಸಲಹೆ ಇಲ್ಲದೆ ಯಾವುದೇ Ear Drops ಅಥವಾ ಮನೆಮದ್ದುಗಳನ್ನು ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.