
ಗದಗ ಜಿಲ್ಲೆಯ ರೋಣದಲ್ಲಿ ಪಶು ಸಾಕಣೆ ಶೆಡ್ಗೆ ವಿದ್ಯುತ್ ಸಂಪರ್ಕ ನೀಡಲು ₹10,000 ಲಂಚ ಸ್ವೀಕರಿಸುತ್ತಿದ್ದ ಹೆಸ್ಕಾಂ ಸೆಕ್ಷನ್ ಅಧಿಕಾರಿ ಮೇಘಯ್ಯ ಹಿರೇಮಠ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ಗುತ್ತಿಗೆ ಬಿಲ್ ಮಂಜೂರು ಮಾಡಲು ₹4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಇನ್ಪೆಕ್ಟರ್ ಹಾಗೂ ಯಾದಗಿರಿಯ ಸುರಪುರದಲ್ಲಿ ಜೆಸ್ಕಾಂ ಜೆಇಗಳು ಲೋಕಾಯುಕ್ತ ದಾಳಿಗೆ ಸಿಲುಕಿದ್ದಾರೆ.
ಉತ್ತರ ಕನ್ನಡದ ಶಿರಸಿಯಲ್ಲಿ ಲೆಕ್ಕ ಪರಿಶೋಧಕ ಮಲ್ಲಿಕಾರ್ಜುನ್ ಪಾಟೀಲ್ ಹಾಗೂ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 3.63 ಲಕ್ಷ ರೂ. ಬಿಲ್ ಮಂಜೂರು ಮಾಡಲು ಲಂಚ ಪಡೆದ ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.