
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಹಾನಿಕಾರಕ ವಿಷಯಗಳನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಪೋರ್ಟಲ್ಗೆ ನೇರವಾಗಿ ವರದಿ ಮಾಡಲು ಮೆಟಾ ಸಮ್ಮತಿ ಸೂಚಿಸಿದೆ.
ಅಮೆರಿಕದ ಮೆಟಾ ಸಂಸ್ಥೆಯು ಭಾರತದಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ನೇರವಾಗಿ ವರದಿ ಮಾಡುವ ವ್ಯವಸ್ಥೆ ಆರಂಭಿಸಲು ಮುಂದಾಗಿರುವ ಮೊದಲ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿದೆ.
ಮಕ್ಕಳ ಆನ್ ಲೈನ್ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.