
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಸ್ತರಣೆ ಮತ್ತು ಭದ್ರತೆಗಾಗಿ 19 ಎಕರೆ 18 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ನಾಗನಾಥಪುರದಲ್ಲಿ ಜೈಲಿನ ಸುತ್ತಲೂ 200 ಮೀಟರ್ ಸುರಕ್ಷಿತ ವಲಯ ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು.
ಕೈದಿಗಳ ಸುಧಾರಣೆಗೆ ಸಾಕಷ್ಟು ಸ್ಥಳಾವಕಾಶ ಹಾಗೂ ಅಗತ್ಯ ಮೂಲಸೌಕರ್ಯಗಳು ಇರುವುದು ಅವಶ್ಯಕ ಎಂದು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯಪಟ್ಟಿದೆ.