
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಸ್ಟೇಷನ್ ಮಾಸ್ಟರ್ ಹುದ್ದೆಗಳ ಭರ್ತಿಗಾಗಿ ಒಟ್ಟು 1,215 ಖಾಲಿ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ.
ಅಭ್ಯರ್ಥಿಗಳು ನವೆಂಬರ್ 25 ರ ರಾತ್ರಿ 11:59 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪದವಿ ವಿದ್ಯಾರ್ಹತೆ ಕಡ್ಡಾಯವಾಗಿದೆ.
ಆಯ್ಕೆಗಾಗಿ ಎರಡು ಹಂತದ ಪರೀಕ್ಷೆಗಳು ನಡೆಯಲಿದ್ದು, ಮೊದಲ ಹಂತದ ಸಿಬಿಟಿ ಪರೀಕ್ಷೆಗೆ 100 ಪ್ರಶ್ನೆಗಳು ಹಾಗೂ 120 ನಿಮಿಷಗಳ ಕಾಲಾವಕಾಶವಿರುತ್ತದೆ.