
ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸಿ ಆರ್ಥಿಕ ಆಧಾರಿತ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಹರ್ಷ ದುಬೆ ಎಂಬ ವಿದ್ಯಾರ್ಥಿ ಆರಂಭಿಸಿದ ಈ ಆಂದೋಲನಕ್ಕೆ ಕರ್ಣಿ ಸೇನೆ ಮತ್ತು ರಣವೀರ್ ಸೇನೆಯಂತಹ ಸಂಘಟನೆಗಳು ಬೆಂಬಲ ಸೂಚಿಸಿವೆ.
ಪ್ರತಿಭಟನಾಕಾರರು ಒಂದು ಕುಟುಂಬಕ್ಕೆ ಒಂದು ಮೀಸಲಾತಿ ಮತ್ತು ಮೀಸಲಾತಿ ಪಡೆಯುವವರ ಪಟ್ಟಿಯನ್ನು ಕಾಲಕಾಲಕ್ಕೆ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.